
*ಬಿನ್ನಪ್ಪ ಲಾಲಿಸಯ್ಯ ಪ್ರಾರ್ಥನಾ ಸುಳಾದಿ : ಶ್ರೀ ವಿಜಯದಾಸರು*#ಬಿನ್ನಪ್ಪ #ಲಾಲಿಸಯ್ಯ #ಪ್ರಾರ್ಥನಾ #ಸುಳಾದಿ #ಶ್ರೀವಿಜಯದಾಸರು#ಎಂತಹದೋ #ನಿನ್ನ #ಸಂದರುಶನ#ಕಂತುವಿನ #ಜನಕ #ಉಡುಪಿಕೃಷ್ಣರಾಯ #ll #ಪ ಎಂತಹದೋ ನಿನ್ನ ಸಂದರುಶನಕಂತುವಿನ ಜನಕ ಉಡುಪಿಕೃಷ್ಣರಾಯ ll ಪ llಪರರ ಓದನತಿಂದೇ l ಪರರದ್ರವ್ಯವ ತಂದೆಪರಸತಿಯರಿಗೆ ನೊಂದೆ l ಗುರುಹಿರಿಯರ ನಿಂದೆ-ಹಿರಿದಾಗಾಡಿದೆ ಮುಂದೆ l ಬರುತಿಪ್ಪ ಪಾಪದಿಂದೆಬರಿದೆ ಪೋಯಿತು ವಂದೆ l ಪರಿಯಾಗಿ ಈ ಬೊಂದೆಅರುಹಿ ತೊರೆದೆ ಬಂದೆ l ಕರುಣಿಸು ಜಗದ ತಂದೆ ll 1 llಸುಜನರ ಗುಣವ ಹಳಿದೆ l ನಿಜಕರ್ಮಗಳ ಹಳಿದೆಕುಜನರ ಸಂಗದಲಿ ಬೆಳೆದೆ l ಭಜನೆಗೆಟ್ಟು ಸುಳಿದೆಪ್ರಜರನ್ನು ಪೊಗಳಿದೆ l ವೃಜಪುಣ್ಯಕೋಶ ಹಳಿದೆಋಜುಮಾರ್ಗವ ತೊರೆದುಳಿದೆ l ರಜನೀಚರಮತಿಗಳಿದೆವಿಜಯವಾರ್ತೆಗೆ ಮುಳಿದೆ l ತ್ರಿಜಗಪತಿ ಕೇಳಿದೆ ll 2 llಹರಿವಾಸರ ಬಿಟ್ಟೆ l ದುರುಳರಿಗೆ ಧನಕೊಟ್ಟೆಹರಿಭಕ್ತರ ತೊರೆದು ಕೆಟ್ಟೆ l ಹರಿಶ್ರವಣ ಬಚ್ಚಿಟ್ಟೆಪರಮ ವ್ರತವ ಮೆಟ್ಟಿ l ಹರುಷದಲ್ಲಿಗೆ ಮನಮುಟ್ಟಿದುರರಸಕೆ ಸುಖಬಿಟ್ಟೆ l ವಿರಕುತಿಯನು ಬಿಟ್ಟೆದುರಿತಕ್ಕೆ ಗುರುತಿಟ್ಟೆ l ಪರಕೆಕಾಣೆನೊ ಬಟ್ಟೆ ll 3 llಜ್ಞಾನವೆಂಬೋದೆ ಇಲ್ಲ l ಏನು ಪೇಳಲಿ ಸೊಲ್ಲನೀನೆಂಬೋದಿಲ್ಲವಲ್ಲ l ಹಾನಿವೃದ್ಧಿಗಳೆಲ್ಲನಾನುಂಬೆ ಎಲ್ಲ ಸಲ್ಲಾ - l ದಾನಾದೆ ಸತತಖುಲ್ಲರಾನುಡಿಗೆ ಸೋತು ಚೆಲ್ಲ- l ರಾನಡತಿ ಸಿರಿನಲ್ಲನಾ ನಡೆದೆ ನೀ ಬಲ್ಲಾ - l ದೇ ನೋಡಪ್ರತಿಮಲ್ಲ ll 4 llಅಪರಾಧಿ ನಾನಯ್ಯ l ಅಪವಾದದವನಯ್ಯಕೃಪಣದಿಂದೆನ್ನಕಾಯಾ l ಉಪಜಯವಾಯಿತು ಪ್ರೀಯಸ್ವಪನದಿ ಪುಣ್ಯಸಹಾಯಾ l ಲಪಮಾಡಿಲಿಲ್ಲ ಜೀಯಾಕೃಪೆಯಲ್ಲಿ ಪಿಡಿಕೈಯಾ l ವಿಜಯವಿಟ್ಠಲರೇಯಾಗುಪುತವಾದುಪಾಯಾ l ತಪಸಿಗಳ ಮನೋ ಜಯ ll 5 ll*- ಶ್ರೀವಿಜಯದಾಸರು.*

